‘ನಿಮ್ಮ ಹೆಂಡತಿಯರ ಸೀರೆ ಸುಟ್ಟು ಹಾಕಿ’- ಶೇಖ್ ಹಸೀನಾ ಫುಲ್‌ ರಾಕ್‌, ಭಾರತದ ಮೇಲೆ ಕೂಗಾಡಿದವರು ಶೇಕ್‌!

author-image
admin
Updated On
‘ನಿಮ್ಮ ಹೆಂಡತಿಯರ ಸೀರೆ ಸುಟ್ಟು ಹಾಕಿ’- ಶೇಖ್ ಹಸೀನಾ ಫುಲ್‌ ರಾಕ್‌, ಭಾರತದ ಮೇಲೆ ಕೂಗಾಡಿದವರು ಶೇಕ್‌!
Advertisment
  • ನಿಮ್ಮ ಹೆಂಡತಿಯರು ಭಾರತದ ಸೀರೆಯಲ್ಲಿ ಸುಂದರವಾಗಿ ಕಾಣಿಸುತ್ತಾರೆ
  • ಮೊದಲು ನಿಮ್ಮ ಹೆಂಡತಿಯರ ಸೀರೆಯನ್ನು ಸುಟ್ಟು ಹಾಕಿ ಎಂದ ಶೇಖ್
  • ಭಾರತೀಯ ಮಸಾಲೆಗಳಿಲ್ಲದ ಆಹಾರವನ್ನು ನೀವು ತಿನ್ನುತ್ತೀರಾ ನೋಡೋಣ

ಮಾಲ್ಡೀವ್ಸ್ ರೀತಿಯಲ್ಲೇ ಬಾಂಗ್ಲಾದೇಶದಲ್ಲೂ ಭಾರತದ ವಿರುದ್ಧ ಬಾಯ್ಕಟ್‌ ಇಂಡಿಯಾ ಅಭಿಯಾನ ನಡೆದಿದೆ. ಆದರೆ ಬಾಂಗ್ಲಾ ಪ್ರಧಾನಮಂತ್ರಿ ಶೇಖ್ ಹಸೀನಾ ವಿರೋಧ ಪಕ್ಷಗಳ ಕುತಂತ್ರ ಕುದ್ದು ಹೋಗಿದ್ದು, ಅಕ್ಷರಶಃ ಚಳಿ ಬಿಡಿಸಿದ್ದಾರೆ. ಭಾರತವನ್ನು ನಿಷೇಧಿಸುವ ಅಭಿಯಾನದ ವಿರುದ್ಧ ಪ್ರಧಾನಿ ಶೇಕ್ ಹಸೀನಾ ಅವರು ಬಹಳ ಆಕ್ರೋಶದ ಮಾತುಗಳನ್ನಾಡಿದ್ದಾರೆ.

ಬಾಂಗ್ಲಾದೇಶದ ವಿಪಕ್ಷ ನಾಯಕರು ಇತ್ತೀಚೆಗೆ ಭಾರತದ ಉತ್ಪನ್ನಗಳನ್ನು ನಿಷೇಧಿಸುವ ಅಭಿಯಾನ ಹಮ್ಮಿಕೊಂಡಿದ್ದಾರೆ. ಇದರ ವಿರುದ್ಧ ಸಿಡಿಮಿಡಿಕೊಂಡಿರುವ ಶೇಖ್ ಹಸೀನಾ ಅವರು ಭಾರತದ ಮೇಲೆ ಕೂಗಾಡಿದವರನ್ನು ಟಾರ್ಗೆಟ್ ಮಾಡಿ ಮಾತಲ್ಲೇ ಚಾಟಿ ಬೀಸಿದ್ದಾರೆ.

publive-image

ಇದನ್ನೂ ಓದಿ: ನವೆಂಬರ್​ 1ಕ್ಕೆ ತ್ರಿಪುರ-ಬಾಂಗ್ಲಾದೇಶ ಹೊಸ ರೈಲು ಮಾರ್ಗ ಉದ್ಘಾಟನೆ.. ಮೋದಿ ಜೊತೆಗೂಡಿ ಚಾಲನೆ ನೀಡಲಿದ್ದಾರೆ ಬಾಂಗ್ಲಾ ಪ್ರಧಾನಿ

ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಸದಸ್ಯರಿಗೆ ಖಡಕ್ ತಿರುಗೇಟು ನೀಡಿರುವ ಶೇಖ್ ಹಸೀನಾ ಅವರು, ನಿಮ್ಮ ಹೆಂಡತಿಯರು ಭಾರತದ ಸೀರೆಯಲ್ಲಿ ಸುಂದರವಾಗಿ ಕಾಣಿಸುತ್ತಾರೆ ಅಲ್ವಾ. ಹಾಗಿದ್ರೆ ಮೊದಲು ನಿಮ್ಮ ಹೆಂಡತಿಯರ ಸೀರೆಯನ್ನು ಸುಟ್ಟು ಹಾಕಿ ಎಂದು ಸವಾಲು ಹಾಕಿದ್ದಾರೆ. ಭಾರತೀಯ ಮಸಾಲೆಗಳಿಲ್ಲದ ಆಹಾರವನ್ನು ನೀವು ತಿನ್ನುತ್ತೀರಾ. ಭಾರತದ ವಿರುದ್ಧ ನಿಷೇಧದ ಬಗ್ಗೆ ಮಾತನಾಡುವವರು ಮೊದಲು ಈ ಕೆಲಸಗಳನ್ನು ಮಾಡಲು ಸಾಧ್ಯವೇ ಎಂದಿದ್ದಾರೆ.


">April 1, 2024

ಹಲವು ವರ್ಷಗಳಿಂದ ಭಾರತ, ಬಾಂಗ್ಲಾದೇಶದ ಮಧ್ಯೆ ಅತ್ಯುತ್ತಮ ಬಾಂಧವ್ಯ ಹೊಂದಿದೆ. ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತ, ಬಾಂಗ್ಲಾದ ಮಧ್ಯೆ ಸಹಕಾರ ಮತ್ತು ಆರ್ಥಿಕ ನೆರವು ನೀಡಲಾಗುತ್ತಿದೆ. ಕೊರೊನಾದಂತಹ ಕಷ್ಟ ಕಾಲದಲ್ಲಿ ಬಾಂಗ್ಲಾದೇಶಕ್ಕೆ ಔಷಧಿ ನೆರವು ನೀಡಿದ ಪ್ರಮುಖ ದೇಶ ಭಾರತವೇ ಆಗಿದೆ. ಅದೂ ಅಲ್ಲದೇ ಬಾಂಗ್ಲಾ ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ಭಾರತದ ಸರ್ಕಾರದೊಂದಿಗೆ ಒಳ್ಳೆಯ ಸ್ನೇಹ ಸಂಬಂಧ ಹೊಂದಿದ್ದಾರೆ. ಇದರ ಮಧ್ಯೆ ಬಾಂಗ್ಲಾದೇಶ ಹಲವು ವ್ಯಾಪಾರ, ವಹಿವಾಟಿನಲ್ಲಿ ಭಾರತವನ್ನು ಅವಲಂಬಿಸಿದೆ. ಹೀಗಿರುವಾಗ ಭಾರತದ ಉತ್ಪನ್ನವನ್ನು ನಿಷೇಧಿಸುವುದು ಶೇಖ್ ಹಸೀನಾ ಅವರನ್ನು ಕೆರಳಿಸಿದ್ದು, ಕೆಂಡಾಮಂಡಲರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment